Monday, June 6, 2011

ಅಪರಿಚಿತೆ....

ಈ ಘಟನೆ ನಡೆದದ್ದು ಸುಮಾರು ‍6 ವರ್ಷಗಳ ಹಿಂದೆ, ಅಂದರೆ ನಾನು ಕಾಲೇಜಿಗೆ ಹೋಗುತ್ತಿದ್ದ ದಿನಗಳಲ್ಲಿ...

ಆವತ್ತು ಸಂಜೆ ಎಂದಿನಂತೆ ಕಾಲೇಜು ಬಿಟ್ಟ ನಂತರ ಬಸ್ ಸ್ಟಾಂಡಿಗೆ ಬಂದು ಬಸ್ಸಿಗೆ ಕಾಯುತ್ತಾ ನಿಂತಿದ್ದೆ. ಅಕ್ಕ ಪಕ್ಕ ಯಾರೂ ಇರಲಿಲ್ಲ, ನಾನು ಒಬ್ಬನೇ ನಿಂತಿದ್ದೆ.ಆಷ್ಟು ಹೊತ್ತಿಗೆ ಅಲ್ಲಿಗೆ ಒಬ್ಬಳು ಹುಡುಗಿ ಬಂದಳು. (ನನಗಿಂತ ಒಂದೆರಡು ವರ್ಷ ದೊಡ್ಡವಳಿರಬಹುದು), ಬಂದವಳೇ ನನ್ನನ್ನು ನೋಡಿ.... “ಹಾಯ್ ಅಂಶುಮಂತ, ಹೇಗಿದ್ದಿಯಾ? ಚೆನ್ನಾಗಿದ್ದಿಯಾ? ಅಪ್ಪ ಅಮ್ಮ ಹೇಗಿದ್ದಾರೆ? ತಂಗಿ ಯಾವ ಕ್ಲಾಸಿನಲ್ಲಿ ಓದುತ್ತಿದ್ದಾಳೆ?” ಎಂದು ಮಾತನಾಡಿಸಲು ಪ್ರಾರಂಭಿಸಿದಳು.

ನಿಜವಾಗಿಯೂ ಅವಳು ಯಾರೆಂದು ನನಗೆ ಗೊತ್ತಿರಲಿಲ್ಲ. (ಅವಳು ನನ್ನ ತಂದೆಯ ಶಿಷ್ಯೆ ಇದ್ದಿರಬಹುದು). ಮಾತನಾಡಿಸುವ ಮುಂಚೆ ತಾನು ಯಾರು ಎಂದಾದರೂ ಹೇಳಬಾರದೇ? ಇಷ್ಟು ಹೊತ್ತು ಮಾತನಾಡಿ “ನೀವು ಯಾರು?” ಎಂದು ಹೇಗೆ ಕೇಳುವುದು ಎಂಬ ಸಂಕೋಚ ಬೇರೆ.

ಇಷ್ಟು ಹೊತ್ತಿಗಾಗಲೇ ಅವಳು ಹೋಗಬೇಕಾಗಿದ್ದ ಬಸ್ಸು ಬೇರೆ ಬಂತು, “ಸರಿ, ಬಾಯ್... ಇನ್ನೊಮ್ಮೆ ಸಿಗುತ್ತೇನೆ..” ಎಂದು ಹೇಳಿ ಹೋದವಳು ಇವತ್ತಿನ ವರೆಗೂ ನನಗೆ ಅವಳ ಭೇಟಿಯಾಗಲಿಲ್ಲ.... ಆ ಅಪರಿಚಿತೆ ಯಾರಿರಬಹುದು ಎಂಬ ಪ್ರಶ್ನೆ ಇನ್ನೂ ನನ್ನ ತಲೆಯಲ್ಲಿ ಕೊರೆಯುತ್ತಿದೆ.....

No comments:

Post a Comment