Sunday, January 2, 2011

ಪ್ರಯಾಣದ ದಾರಿ

ಅದೊಂದು ದಿನ ಹೊರಟಿದ್ದೆ ದೆಹಲಿಗೆ
ಕೆಲಸದ ನಿಮಿತ್ತ
ಎರಡು ದಿನದ ಸುದೀರ್ಘ ಪ್ರಯಾಣ ಹೊರಟಿದ್ದೆ ದೆಹಲಿಗೆ
ಅಲ್ಲದೇ ಬಹಳ ಬೇಜಾರು ತರಿಸುವಂಥದ್ದು ಕೂಡಾ

ಉದ್ದದ ರೈಲು ಬಂಡಿಯದು
ಇದೇನು ಸಣ್ಣ ಪ್ರಪಂಚವೋ ಎಂಬಂತ್ತಿತ್ತದು
ತರಹ ತರಹದ ಜನ
ನಾನಾ ವಿಧದ ಬದುಕುಗಳನ್ನು ತುಂಬಿಕೊಂಡಿತ್ತದು

ಹೊಟ್ಟೆ ಪಾಡಿಗಾಗಿ ಕೆಲಸ ಹುಡುಕಿಕೊಂಡು
ಹೊರಟವರು ಹಲವರು
ಮೋಜು ಮಸ್ತಿಗಾಗಿ ಹೊರಟವರು ಕೆಲವರು
ತೀರ್ಥ ಯಾತ್ರೆಯಲ್ಲಿ ದೇವ ದರ್ಶನಕ್ಕಾಗಿ ಹೋಗುವವರು ಉಳಿದವರು

ಬಂಡಿ ಹೊರಟಿತೋ, ತೆರೆದುಕೊಂಬುದು
ಅದ್ಭುತ ಪ್ರಪಂಚವೊಂದು
ಇಲ್ಲಿ ಭಾಷೆಯ ಬಂಧವಿಲ್ಲ, ಗಡಿಗಳ ತೊಂದರೆಯಿಲ್ಲ
ಈಗ ಎಲ್ಲರೂ ಬಂಧುಗಳೇ, ಎಲ್ಲರೂ ಸ್ನೇಹಿತರೇ

ರೈಲು ಸಾಗಿದಂತೆಯೇ ಇಲ್ಲಿನ ಬದುಕೂ ಸಾಗುವುದು
ನದಿ, ಕೆರೆ, ತೊರೆಗಳನ್ನು ದಾಟುತ್ತಾ
ಊರು ಕೇರಿಗಳನ್ನು ಮೀರುತ್ತಾ
ಹೋಗುವೆವು ಮುಂದೆ, ನೆನಪುಗಳುಳಿವವು ಹಿಂದೆ

ಒಹ್, ಅದೋ ನೋಡಿ ಹೊರಗೆ
ಇತ್ತ ಕಡೆ ಊರೊಂದು ಚಕ್ಕನೆ ಹಾದು ಹೋಯಿತು
ಅತ್ತ ಕಡೆ ದೂರದಲ್ಲಿ ಹಸಿರು ಕಾಡಿನ್ನೂ ಕಾಣುತ್ತಿದೆ
ಅದೇನು ಎಂದು ಅರ್ಥ ಮಾಡಿಕೊಳ್ಳೂವುದರಲ್ಲಿ ಎಲ್ಲವೂ ಮಾಯವಾಗುತ್ತಿದೆ

ಪ್ರಯಾಣ ಮುಗಿಯುತ್ತಾ ಬಂದಿದೆ
ಇನ್ನೇನು ಗಮ್ಯ ಸ್ಥಾನ ತಲುಪುವ ಸಮಯ
ರೈಲು ಕೊನೆಯ ಸ್ಥಳ ತಲುಪಿದೆ, ಎಲ್ಲರೂ ಇಳಿದಾಗಿದೆ
ಇನ್ನು ಮುಂದೆ ನಮ್ಮ ದಾರಿ ನಮಗೆ, ನಿಮ್ಮ ದಾರಿ ನಿಮಗೆ

ಬಹಳ ಆಶ್ಚರ್ಯ ವಲ್ಲವೇ,
ನಮ್ಮ ಇಡಿ ಬದುಕಿನ ಚಿತ್ರಣ ಕೇವಲ ಎರಡು ದಿನದ ಪ್ರಯಾಣದಲ್ಲಿ ಕಂಡಿದೆ
ನಿಜ ಜೀವನದಲ್ಲೂ ಹೀಗೆಯೆ, ಹುಟ್ಟೂತ್ತೇವೆ, ಕೆಲ ದಿನ ಇದ್ದು ಪ್ರಯಾಣ ಮುಗಿಸಿ
ಕೊನೆಯ ನಿಲ್ದಾಣದಲ್ಲಿ ಇಳಿದು ಜೀವನ ಕೊನೆಗೊಳಿಸುತ್ತೇವೆ.