ತಿಳಿಯದು ನನಗೆ
ಬದುಕೆಂದರೇನೆಂದು
ಅರ್ಥವಾಗದು ನನಗೆ
ಏಕೆ ಬದುಕಬೇಕೆಂದು
ಹುಡುಕುತಾ ಹೊರಟರೆ ಇದನ್ನು
ಮತ್ತೆ ಜಟಿಲವಾಗುತ್ತಿದೆ
ಕಗ್ಗಂಟಾಗುತ್ತಿದೆ
ದಟ್ಟ ಕಾಡಿನಂತೆ, ದಿಕ್ಕಿಲ್ಲದ ಸಾಗರದಂತೆ
ಸಾಧು ಸಂತರು
ಅರ್ಥೈಸಿದರು ಅವರ ಭಾಷೆಯಲ್ಲೇ
ಅಜ್ನಾನಿ ನಾನು
ನಾನೇನು ಬಲ್ಲೆ ವೇದಾಂತದ ಭಾಷೆಯ?
ನನಗೆ ತಿಳಿದುದಿಷ್ಟೆ
ನಿನ್ನೆ ಇಂದಿಲ್ಲ, ನಾಳೆ ಗೊತ್ತಿಲ್ಲ
ನೀ ಬದುಕು, ಆದರೆ ನಿನಗಾಗಿ ಅಲ್ಲ
ಚೆನ್ನಾಗಿದೆ ಕವನ, ಅದರ ಭಾವ
ಪ್ರತ್ಯುತ್ತರಅಳಿಸಿawesome spirit.... simple, crisp and straightforward.. Loved it!!!! too good!!!
ಪ್ರತ್ಯುತ್ತರಅಳಿಸಿ